Monday, 27 July 2020
'ಹಂಬಲ'
ಆ ಸಾವಿನ ಹಂಬಲ ನೀಡುವ ನಶೆ
ಈ ಬದುಕಿನ ಬಟ್ಟಲಿನಲ್ಲಿಲ್ಲ ನೋಡು!
ಹುಟ್ಟುವಾಗಿನ ಮಗುವಿನ ಅಳುವಿಗೂ
ಸಾಯುವಾಗಿನ ಹೆಣದ ನಗುವಿಗದೆಷ್ಟು ಫರಕು!
ಮುಖವಾಡದ ಬದುಕು,ಸಾವಿನ ಮುಂದೆ ಸೋಲಬೇಕು!
ಉಟ್ಟ ಬಟ್ಟೆಗಳನ್ನೆಲ್ಲ ಬಿಚ್ಚಿ ಎಸೆದರೂ
ಬೆತ್ತಲೆ ಎನಿಸುವುದೇ ಇಲ್ಲ, ಎಷ್ಟಿವೆಯೋ ಕೃತ್ರಿಮದ ಪದರು?
ಇಲ್ಲಿ ನಗುವಿಗೂ ಒಂದು ಬೆಲೆ,ಅಳುವೂ ಮಾರಾಟದ ಸರಕೇ!
ಸಂಬಂಧಗಳಿಗೊಂದೊಂದು ಬ್ರಾಂಡು,ನೀಟಾದ ಪ್ಯಾಕು!ಹೂಗಳರಳಿದರೆ ಕಂಪಿಲ್ಲ, ಹಕ್ಕಿ ಹಾಡಿದರೆ ಇಂಪಿಲ್ಲ.
ಸುರಿವ ಪುನರ್ವಸು ಮಳೆಯಲ್ಲೇಕೆ ಕಣ್ಣೀರಿನ ಉಪ್ಪು?
ಆಷಾಢದ ತುಂಟ ಗಾಳಿಯಲ್ಲೂ ದೀರ್ಘ ನಿಟ್ಟುಸಿರು!
ಸೋಮಾರಿ ಸೂರ್ಯನ ಬಿಸಿಲು ಮಾತ್ರ ಹೆಣ ಸುಡುವ ಚಿತೆ!
ಮಾತುಗಳನ್ನೆಲ್ಲ ಕೊಲ್ಲಬೇಕು,ಸಾಯುವ ಮೊದಲು.
ಮೌನವನ್ನೂ ಆಚೆಗೆ ಅಟ್ಟಬೇಕು ಎಲ್ಲಕ್ಕೂ ಮೊದಲು.
ಖಾಲಿಯಾಗಬೇಕು,ನಿಸ್ಸಾರವಾಗಬೇಕು,ನಿರ್ಮೋಹಿಯಾಗಬೇಕು.
ಮತ್ತು....
ನಾನಾಗಬೇಕು..ಸಾವಾಗಬೇಕು..ಸಾವಿನ ನಿಃಶಬ್ಧವಾಗಬೇಕು!
Subscribe to:
Posts (Atom)
"ಹಿ.ಮ.ನಾ. ರವರ ಬಗ್ಗೆ.
ಕವಿ, ಪತ್ರಕರ್ತ, ಸಮಾಜಸೇವಕ, ಸ್ವಾತಂತ್ರ್ಯ ಹೋರಾಟಗಾರ ಹಿ.ಮ. ನಾಗಯ್ಯನವರು ಹುಟ್ಟಿದ್ದು ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ ಹೊಸಹಳ್ಳಿ ಹೋಬಳಿಗೆ ಸೇರಿದ ಹಿರೇಕುಂಬ...
-
ಕೋವಿಡ್ ನ ಈ ದುರಿತಕಾಲದಲ್ಲಿ ಗುಳೆ-ವಲಸೆ,ಹಸಿವು,ಸಾವು ಎಂಬೆಲ್ಲಾ ಶಬ್ಧಗಳನ್ನು ಕೇಳಿದಾಗ ಆಯಾಚಿತವಾಗಿ ಬಸವಣ್ಣ ನೆನಪಾಗಿಬಿಡುತ್ತಾನೆ. ಅವನ ಸಮಾಜವಾದೀ ಸಮಸಮಾಜದ ಕಲ್ಪನೆ...
-
ಗ್ರಾಮಭಾರತದಲ್ಲಿ ದೇಸೀ ಹಬ್ಬಗಳು ಈ ಆಧುನಿಕ ಯುಗದಲ್ಲೂ ಪಳೆಯುಳಿಕೆಯ ರೂಪದಲ್ಲಿಯಾದರೂ ಇನ್ನೂ ಆಚರಿಸಲ್ಪಡುತ್ತಿರುವುದು ಅವುಗಳ ವೈಶಿಷ್ಟ್ಯತೆಗೆ ಸಾಕ್ಷಿಯಾಗಿದೆ. ಜೋಕ...
-
ಕವಿ, ಪತ್ರಕರ್ತ, ಸಮಾಜಸೇವಕ, ಸ್ವಾತಂತ್ರ್ಯ ಹೋರಾಟಗಾರ ಹಿ.ಮ. ನಾಗಯ್ಯನವರು ಹುಟ್ಟಿದ್ದು ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ ಹೊಸಹಳ್ಳಿ ಹೋಬಳಿಗೆ ಸೇರಿದ ಹಿರೇಕುಂಬ...
