Thursday, 14 June 2018

....ನಾ ಆಗಿದ್ದಿದ್ದರೆ..,

ನಾ ನಗುವಾಗಿದ್ದರೆ
ನಿನ್ನ ತುಟಿಯಲಿರುತ್ತಿದ್ದೆ
ನಾ ಮಗುವಾಗಿದ್ದರೆ
ನಿನ್ನ ಮಡಿಲಲಿರುತ್ತಿದ್ದೆ
ನಾ ನೆಲವಾಗಿದ್ದರೆ
ನಿನ್ನ ಹೆಜ್ಜೆಗೆ ಗುರುತಾಗುತಿದ್ದೆ
ನಾ ಮಳೆಯಾಗಿದ್ದರೆ
ನಿನ್ನ ನೆನೆಸಿ ಆಡುತ್ತಿದ್ದೆ
ನಾ ಗಾಳಿಯಾಗಿದ್ದರೆ
ನಿನ್ನ ಸೆರಗ ಸೇರುತಲಿದ್ದೆ
ನಾ ಬೆಂಕಿಯಾಗಿದ್ದರೆ
ನಿನ್ನ ಕೈಯ ದೀಪವಾಗುತಿದ್ದೆ
ನಾ ಬದುಕಾಗಿದ್ದರೆ
ನಿನ್ನ ಆಯುಷ್ಯವಾಗುತಿದ್ದೆ

ನಾ ಸಾವಾಗಿದ್ದರೆ ನಿನಗೆ
ಪ್ರಾಣವನ್ನಿತ್ತು ತೆರಳುತ್ತಿದ್ದೆ



Friday, 8 June 2018

ವಿದಾಯಕ್ಕೊಂದು ಕವಿತೆ....

ನೀನು ಈಗ ಗೂಡು ಕಟ್ಟಿಕೊಂಡ ತಾಯಿಗುಬ್ಬಿ
ನಾನೋ...ಸೂತ್ರ ಕಿತ್ತ ಗಾಳಿಪಟದ ಪ್ರೇತರೂಪ
ಹೀಗೇ ಯಾವಗಲಾದರೊಮ್ಮೆ,
ಮಳೆಯಲ್ಲಿ ನೆಂದು ನಡುಗುವಾಗಲೆಲ್ಲ
ನಿನ್ನ ನೆನಪಾಗುತ್ತದೆ..
ಅಲ್ಲೇ ಬೋಳುಮರದ ಮೇಲೆ
ಕುಳಿತ ಕುಂಟಗುಬ್ಬಿಯ ಜೊತೆಗೆ
ಮಾತನಾಡಿಕೊಳ್ಳುತ್ತೇನೆ.....

ನೀನು ಕೊಟ್ಟ ವಿರಹದ ನೋವಿಗಿಂತಲೂ
ನಾವಿಬ್ಬರೂ ಜೊತೆಗಿದ್ದ ಕ್ಷಣ ನೆನಪಾಗುತ್ತಿದೆ.
ಸ್ವಲ್ಪ ಕಣ್ಣೀರು,ಬೀಸಿದ ಗಾಳಿಗೋ
ಅಥವ ನಿಟ್ಟುಸಿರಿಗೋ ಇಳಿವ ಮುನ್ನವೇ ಆವಿ!
ಹೌದು...
ನೀನು ಕೊಟ್ಟು ಹೋದ
ನೋವಿನ ಸಾಲವನ್ನು
ನಾ ಬರೆದ ಸಾಲುಗಳಿಂದಲೇ
ತೀರಿಸುವ ವ್ಯರ್ಥ ಪ್ರಯತ್ನ ನನ್ನದು..

ನಾ ಬರೆದ ಸಾಲುಗಳಲ್ಲಿ
ಮೊದಲ ಪ್ರೀತಿಯ ಸೋಲಿದೆ.

ಪ್ರೀತಿಸಿದ ಹೃದಯದ ಸಾವಿದೆ.
ಹರಿಸಿದ ಕಣ್ಣೀರ ಹನಿಗಳನು
ನೆನಪಿನ ಲೇಖನಿಯೊಳಗೆ ಸೇರಿಸಿ
ಬಾಳಪುಸ್ತಕದಲ್ಲಿ ಬರೆದ ಸಾಲುಗಳಿವು.
ಅಲ್ಲಲ್ಲಿ ಅಕ್ಷರಗಳು
ಸ್ಪಷ್ಟವಾಗಿ ಕಾಣದಿದ್ದರೆ ಕ್ಷಮಿಸಬಿಡು..
ಯಾಕೆಂದರೆ,ನನಗೂ ವಯಸ್ಸಾಯಿತು ನೋಡು!
ಆ ಅಕ್ಷರದೊಳಗೆ ನನ್ನ
ಕಣ್ಣೀರೂ ಜಾಸ್ತಿಯೇ ಹರಿದಿರಬಹುದು.
ಮುಗಿಯದ ಈ ಬಾಳಪುಸ್ತಕದಲ್ಲಿ
ಕಣ್ಣೀರು ಮುಗಿಯುವರೆಗೆ ಬರೆಯುತ್ತೇನೆ.
ಬರವಣಿಗೆಯಿಂದ ಬರೀ ನಿನ್ನ
ನೆನಪಿನ ಮೆರವಣಿಗೆ ಮಾಡಿದ ನಾನು
ನನ್ನಲ್ಲಿ ಬದಲಾವಣೆ ತಂದು
“ಕವಿ ಕಾಣದನ್ನೂ ಕಂಡು ”
ಕವಿಯಾಗಿ ಬರೆಯುತ್ತೇನೆ !




Thursday, 7 June 2018

ಹುಚ್ಚು ಖೋಡಿ ಮನಸು - ೧೦

ಏಕಾಂತದ ಗುಡಿ ಕಟ್ಟಿದ್ದೆ
ಮೌನದ ಕಲಶವಿಟ್ಟಿದ್ದೆ
ಅಂತರಂಗದ ಗರ್ಭಗುಡಿಯಲ್ಲಿ
ನಿನ್ನದೇ ಮಾನಸ ಪೂಜೆ!!
ಕನಸು ಹೂವುಗಳೇ- ನಿನಗೆ ಬಕುಲ ಮಾಲೆ!
ಕಾಲವೂ ಮರೆತಿತ್ತು - ಇಂದು ಮತ್ತು ನಾಳೆ!
ಆದರೂ ಏಕಿತ್ತು ನಿನಗೆ ಅಷ್ಟೊಂದು ಮುನಿಸು?
ಕೇಳಿತ್ತು ನೋಡು ಈ ಹುಚ್ಚು ಖೋಡಿ ಮನಸು!!

"ಹಿ.ಮ.ನಾ. ರವರ ಬಗ್ಗೆ.

 ಕವಿ, ಪತ್ರಕರ್ತ, ಸಮಾಜಸೇವಕ, ಸ್ವಾತಂತ್ರ್ಯ ಹೋರಾಟಗಾರ ಹಿ.ಮ. ನಾಗಯ್ಯನವರು ಹುಟ್ಟಿದ್ದು ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ ಹೊಸಹಳ್ಳಿ ಹೋಬಳಿಗೆ ಸೇರಿದ ಹಿರೇಕುಂಬ...