ನೀನು ಹಾಸಿಕೊಂಡ ಮೌನದ ಮೇಲೆ
ನಮ್ಮ ನಡುವಿನ ಪ್ರಶ್ನೆಗಳನ್ನೆಲ್ಲ ತುಂಬಿ
ಗಂಟುಕಟ್ಟಿ ದೂರ ಎಸೆಯಬೇಕು...
ನನ್ನ ನಿನ್ನ ನಡುವಿನ ಅಂತರದ ಹೊಳೆಗೆ
ಭರವಸೆಯ ಕಲ್ಲುಗಳ ಹಾಕಿ
ಎಂದೂ ಮುಳುಗದ ಸೇತುವೆ ಕಟ್ಟಬೇಕು..
ನಿನ್ನ ಜೊತೆಯಿದ್ದಾಗಲೆಲ್ಲ ಬೇಗನೆ ಸರಿವ
ಆ ಕಾಲದ ಕೈಕಾಲುಗಳ ಬಿಗಿದು
ಬೆಂಕಿ ಹಚ್ಚಿ ಛಳಿ ಕಾಯಿಸಿಕೊಳ್ಳಬೇಕು..
ನೀನಿದ್ದೆಡೆಯೆಲ್ಲಾ ತಂಗಾಳಿಯೇ ಬೀಸುವಂತೆ
ಹಗಲಿಡೀ ಬೆಳದಿಂಗಳಿರುವಂತೆ,
ವರ್ಷವಿಡೀ ಹೂವುಗಳರಳುವಂತೆ,
ಅನುಗಾಲವೂ ಇಬ್ಬನಿ ಉದುರುವಂತೆ
ಸೃಷ್ಟಿಕರ್ತನಿಗೆ ಶಿಸ್ತಾಗಿ ಹೇಳಿಬಿಡಬೇಕು...
ನನ್ನೊಲವೇ...
ನಿನ್ನ ಒಂದು ನಗುವಿಗೆ ಇಷ್ಟು ಸಾಕಲ್ಲವೇ?
ಕೇಳಿ ಹೇಳು..ಆ ನಿನ್ನ ಹುಚ್ಚುಖೋಡಿ ಮನಸು ???
ನಮ್ಮ ನಡುವಿನ ಪ್ರಶ್ನೆಗಳನ್ನೆಲ್ಲ ತುಂಬಿ
ಗಂಟುಕಟ್ಟಿ ದೂರ ಎಸೆಯಬೇಕು...
ನನ್ನ ನಿನ್ನ ನಡುವಿನ ಅಂತರದ ಹೊಳೆಗೆ
ಭರವಸೆಯ ಕಲ್ಲುಗಳ ಹಾಕಿ
ಎಂದೂ ಮುಳುಗದ ಸೇತುವೆ ಕಟ್ಟಬೇಕು..
ನಿನ್ನ ಜೊತೆಯಿದ್ದಾಗಲೆಲ್ಲ ಬೇಗನೆ ಸರಿವ
ಆ ಕಾಲದ ಕೈಕಾಲುಗಳ ಬಿಗಿದು
ಬೆಂಕಿ ಹಚ್ಚಿ ಛಳಿ ಕಾಯಿಸಿಕೊಳ್ಳಬೇಕು..
ನೀನಿದ್ದೆಡೆಯೆಲ್ಲಾ ತಂಗಾಳಿಯೇ ಬೀಸುವಂತೆ
ಹಗಲಿಡೀ ಬೆಳದಿಂಗಳಿರುವಂತೆ,
ವರ್ಷವಿಡೀ ಹೂವುಗಳರಳುವಂತೆ,
ಅನುಗಾಲವೂ ಇಬ್ಬನಿ ಉದುರುವಂತೆ
ಸೃಷ್ಟಿಕರ್ತನಿಗೆ ಶಿಸ್ತಾಗಿ ಹೇಳಿಬಿಡಬೇಕು...
ನನ್ನೊಲವೇ...
ನಿನ್ನ ಒಂದು ನಗುವಿಗೆ ಇಷ್ಟು ಸಾಕಲ್ಲವೇ?
ಕೇಳಿ ಹೇಳು..ಆ ನಿನ್ನ ಹುಚ್ಚುಖೋಡಿ ಮನಸು ???
No comments:
Post a Comment