ನಾವು..ಈ ದೇಶದ ರಾಜಕಾರಣಿಗಳಿಂದ,ರಾಜಕಾರಣದಿಂದ ಜನಕ್ಕೆ, ಸಮಾಜಕ್ಕೆ ಏನಾದರೂ ಒಳ್ಳೆಯದಾದೀತೆಂಬ ಸಣ್ಣ ಭರವಸೆಯನ್ನೂ ಕಳೆದುಕೊಂಡು ಬಾಜೀರಾಯನ ಕಾಲವಾಯಿತು ಬಿಡಿ! In fact ಇದು ರಾಜಕಾರಣಿಗಳಿಗೆ ಗೊತ್ತಾದ್ದರಿಂದಲೇ, ಅಭಿವೃದ್ಧಿ-ಅಭ್ಯುದಯಗಳ ಗೊಡವೆಗೆ ಹೋಗದೆ, "ಧರ್ಮ" ವೆಂಬ ಗಾಂಜಾದ ಅಮಲನ್ನು ಜನತೆಗೆ ಏರಿಸಿ,ಮರೆಸಿ,ಮಲಗಿಸಿ..ಮಲಗಿದವರ ಮೇಲೆ ಮೆರೆಯಬಹುದಾದ ಸುಲಭ-ಸರಳ,ಖರ್ಚಿಲ್ಲದ ದಾರಿ ನೋಡಿಕೊಂಡಿದ್ದಾರೆ!
Social Media ದ ಈ ಜಮಾನದಲ್ಲಿ ದೇಶದಲ್ಲಿ, ಜಗತ್ತಿನಲ್ಲಿ ನಡೆಯುವ ಪ್ರತಿಯೊಂದು ಘಟನೆಗೂ ಏನಾದರೂ ಪ್ರತಿಕ್ರಿಯೆ ಕೊಟ್ಟು ನಾವು ದೊಡ್ಡ ತೋಲಪ್ಪಗಳಾಗುವ ಧಾವಂತಕ್ಕೆ ಬಿದ್ದುಬಿಟ್ಟಿದ್ದೇವೆ ನಾವೆಲ್ಲ! ಮನಸ್ಸುಗಳ ನೆಮ್ಮದಿಗೆ ಕಲ್ಲು ಹಾಕಿಕೊಂಡು ಕ್ಷುದ್ರರಾಗುತ್ತ..ನಮ್ಮ ಭವಿಷ್ಯದ ಸಂತತಿಗಳ ಬಾಲ್ಯಕ್ಕೂ ಮುಳ್ಳುಗಳಾಗುತ್ತಿದ್ದೇವೆ.
Yes...ನಾವು ಅಜ್ಞಾನಿಗಳಾಗಬೇಕಿದೆ... ಅಮಾಯಕರಾಗಬೇಕಿದೆ..ಮುಗ್ಧರಾಗಬೇಕಿದೆ..ಅಯೋಗ್ಯರಾಗಬೇಕಿದೆ. ಇಲ್ಲದೇ ಇದ್ದರೆ, ನಾವು ರಾಜಕಾರಣಿಗಳು ಹಚ್ಚುವ ಬೆಂಕಿಗೆ ಉರುವಲುಗಳಾಗಿ ಉರಿದು ಬೂದಿಯಾಗುತ್ತೇವಷ್ಟೇ!
No comments:
Post a Comment