ಈ Research Thesis ಗಳನ್ನು ಓದೋದೆಂದರೇನೆ ಪರಮ ಹಿಂಸೆ. ನಿರ್ಭಾವುಕ ಭಾಷೆ,ನಿರ್ಜೀವವೆನಿಸುವ presentation ಗಳು ಬೋರೆನಿಸುತ್ತವೆ. Offcoz ಆ thesis ನ್ನು ಬರೆದವರನ್ನು ಬಿಟ್ರೆ ಬೇರೆಯವರು ಓದೋದೇ ಕಡಿಮೆ.
ಡಾ|| ಎಚ್.ಎಂ.ಎಂ.ರವರ "The Old People of Makunti" ಪುಸ್ತಕ ಮಾತ್ರ ಇದಕ್ಕೆ ಹೊರತಾಗಿದೆ. 2-3 ಸಲ ಓದಿದರೂ ಓದಬೇಕೆನಿಸುವ ಪುಸ್ತಕವಿದು. ಕನ್ನಡದ ಅಕ್ಷರ ಲೋಕದಲ್ಲಿ Gerentrology(ವೃದ್ಧರ ಅಧ್ಯಯನ ಶಾಖೆ)ಗೆ ಸಂಬಂಧಿಸಿದಂತೆ ಬಂದ ಮೊದಲ ಪುಸ್ತಕ.ವೃದ್ಧರನ್ನು ಸಮಾಜಶಾಸ್ತ್ರೀಯ ಹಿನ್ನೆಲೆಯಲ್ಲಿ ಕ್ಷೇತ್ರಾಧ್ಯಯನ ಮಾಡಿ ಬರೆದ ಏಕೈಕ ಪುಸ್ತಕ.ಕರ್ನಾಟಕದಲ್ಲಷ್ಟೇ ಅಲ್ಲ ಭಾರತೀಯ ಸಮಾಜಶಾಸ್ತ್ರ ಕ್ಷೇತ್ರಕ್ಕೂ ಇದು ಮೈಲಿಗಲ್ಲೇ!
ಧಾರವಾಡದಿಂದ 10km ದೂರದ ಮಾಕುಂಟಿ ಎಂಬ ಹಳ್ಳಿಯ ವೃದ್ಧರನ್ನು ಸತತ 3 ವರ್ಷಗಳ ಕಾಲ ಅಧ್ಯಯನ ಮಾಡಿ(1963-66) ಅವರ ಸಾಮಾಜಿಕ ಮಹತ್ವವನ್ನು ಜಗತ್ತಿನೆದುರು ಡಾ|| ಎಚ್.ಎಂ.ಎಂ.ತೆರೆದಿಟ್ಟಿದ್ದಾರೆ.ಅಲ್ಲಲ್ಲಿ ಮಧುರ ಹಾಸ್ಯದ ನಿರೂಪಣೆ,ಅವರೇ ಕೈಯಾರೆ ಬಿಡಿಸಿದ ರೇಖಾಚಿತ್ರಗಳು..ಪುಸ್ತಕವನ್ನು ಓದಿಸುತ್ತವೆ.
ಪ್ರಸ್ತುತ ಈ ಪುಸ್ತಕ ಜಗತ್ತಿನ ಅನೇಕ ವಿಶ್ವವಿದ್ಯಾಲಯಗಳ ಲೈಬ್ರರಿಗಳಲ್ಲಿದೆ. ಅದರ ಕನ್ನಡ ಆವೃತ್ತಿಯೂ ಇದೆ.(ಸಂಡೂರಿನವರೊಬ್ಬರು ಮಾಡಿದ್ದಾರೆ) Online ನಲ್ಲಿ Google books,amazon, Penguin, Bantom ಗಳಲ್ಲಿ ಲಭ್ಯವಿದೆ.
ನೀವೂ ಓದಬಹುದು.
No comments:
Post a Comment