ಮಾತುಗಳ ಕೋಟೆ ಬೇಧಿಸಿ
ಮೌನ ಹೆಕ್ಕುವ ಕಲೆಗಾರಿಕೆ..
ಮೌನದ ಮೆತ್ತನೆಯ ನೆಲದಲ್ಲಿ
ನಿನ್ನ ಮಾತುಗಳ ಬಿತ್ತುವ ಕುಶಲತೆ..
ಮಾತುಗಳನ್ನೇ ಹುಲುಸಾಗಿ ಬೆಳೆಸಿ
ಕುಯ್ದು ರಾಶಿಯೊಟ್ಟುವ ದಕ್ಷತೆ..
ಅರೇ..ನನ್ನ ಬಂಜರು ಎದೆಯಲ್ಲೂ
ಅದೆಂತಹಾ ಬೆಳೆ ತೆಗೆದೆಯಲ್ಲವೇ ನೀನು?
ಭೂಮಾಲೀಕನಲ್ಲವೇ ನಾನು? ಗೇಣಿ ನೀನು!
ಅದಿರಲಿ,ಹಿಂದಿನ ವರ್ಷದ ಗೇಣಿ ಬಾಕಿ
ಈ ವರ್ಷದಕ್ಕೆ ಸೇರಿಸಿ ಕೊಟ್ಟುಬಿಡು.
ಏನಾದರೂ ಬಿತ್ತಿಕೋ..ಬೆಳೆದುಕೋ!!
No comments:
Post a Comment