ಮನಸ್ಸಿನಲ್ಲಿ ಬಂಧಿಯಾದವನಿಗೆ
ಬೇಡಿಯ ಅಗತ್ಯವೇನಿದೆ?
ಎದೆಯಲ್ಲಿ ಕೆಂಡವಿಟ್ಟುಕೊಂಡವನ
ನಗುವಿಗಿರುವ ಅರ್ಥವೇನು?
ಕಂಬನಿಯ ಕಟ್ಟಿದವನೊಬ್ಬ
ಅತ್ತಾದರೂ ಮಾಡುವುದೇನು?
ಇಲ್ಲಿ ಕೈ ಹಿಡಿವವರಿಲ್ಲ ಗೆಳೆಯಾ..
ನಮ್ಮ ಕೈ ನಾವೇ ಹಿಡಿಯಬೇಕು!
ಕಸುವಿರುವ ತನಕ ನಡೆಯಬೇಕು!
ಇಷ್ಟಕ್ಕೂ ಬೋರಲು ಬಿದ್ದರೆ,
ಭೂಮಿಯ ಒಡಲು!
ಅಂಗಾತನೆ ಬಿದ್ದರೆ,ಆಗಸದ ಚುಕ್ಕಿ!
ಕಾಣುವುದಷ್ಟೇ ಸತ್ಯ ಗೆಳೆಯಾ..!
ಕಾಣದಿರುವುದಕ್ಕೆ ಹಂಬಲಿಸಬೇಡ!
No comments:
Post a Comment