ಚುನಾವಣೆಗಳು ಈಗೀಗ ಹಳ್ಳಿಗರಲ್ಲಿ ಅಂತಹ ಕುತೂಹಲ, ಸಂಭ್ರಮಗಳನ್ನು ಹುಟ್ಟಿಸುತ್ತಲಿಲ್ಲ. ಅಂತಪ್ಪ ಮೋದೀನೇ ಎರಡು ಬಾರಿ ಗೆದ್ದರೂ ನಮಗೇನೂ ಮಾಡಲಿಲ್ಲ..ಇನ್ನು ಈ ಪುಟಗೋಸಿಗಳದ್ಯಾವ ಲೆಕ್ಕ ಬಿಡು ಎಂಬ ದಿವ್ಯ ನಿರ್ಲಕ್ಷ್ಯವನ್ನು ಹಳ್ಳಿಗಳು ಹೊದ್ದು ಕುಳಿತಿವೆ. ಅದೇ ಅಟವಾಳಿಗೆಯಲ್ಲಿ ಎಲೆಡಕೆ ಮೆಲ್ಲುತ್ತಾ ಎಳೆಕೂಸಿನ ಜೋಲಿ ತೂಗುವ ಮುದುಕಿಯ ವಿಷಣ್ಣತೆ..ಪಕ್ಕದಲ್ಲೇ ಮಲಗಿದ ಕೆಂದ ನಾಯಿಯ ನಿರ್ವಿಕಾರತೆಯೇ ಎಲ್ಲೆಲ್ಲೂ....
ಒಂದಷ್ಟು ದುಡ್ಡಿರುವ,ದುಡ್ಡು ಮಾಡಿಕೊಳ್ಳುವ ಹಂಬಲವಿರುವ ಅಪಾತ್ರರು,ಅಯೋಗ್ಯರು ಜಾತಿ-ಸಮುದಾಯಗಳ ಹೆಸರಿನಲ್ಲಿ ಊರಿನ ಗುಡಿಗೋ ಅಥವಾ ಇನ್ಯಾರಿಗೋ ಒಂದಷ್ಟು ಹಣಕೊಟ್ಟು ಗೆಲ್ಲುವ ದಾರಿಯನ್ನು ಸರಳಗೊಳಿಸಿಕೊಳ್ಳುತ್ತಿದ್ದಾರೆ.ಅಂಥವರ ಬೆನ್ನಿಗೊಂದಷ್ಟು ಅದೇ ಕುಡುಕರ ಹಿಂಡು ನಿಂತಿದೆ. ತಳಜಾತಿಯ ದುಡಿವ ಬಡವರ್ಗದ ಜನಕ್ಕೆ ಚುನಾವಣೆ ಎನ್ನುವುದೇ ಕುಟುಂಬ ಒಡೆಯುವ,ಹೊಸ ಕುಡುಕರನ್ನು ಹುಟ್ಟಿಸುವ ಮಹಾಪಿಡುಗಿನಂತೆ ಕಾಡುತ್ತಲಿದೆ.
"ಅಂಬೇಡಕರ್" ಮಹಾತ್ಮ ಬರೆದ "ಸಂವಿಧಾನದ ಹೊತ್ತಗೆ" ಯ ಮೇಲೆಲ್ಲಾ ತಿನ್ನಲು ಕಾದ ಕೊಂಡಿಹುಳುಗಳು..!
ಇದರ ಮಧ್ಯೆ...ನಾನು "ಪ್ರಜಾ ಪ್ರಭುತ್ವ" ವನ್ನು ಎಲ್ಲಿದೆಯೆಂದು ಹುಡುಕುತ್ತಿದ್ದೇನೆ!! ಟೈಮಿದ್ದರೆ ನೀವೂ ಕೂಡಾ...!
No comments:
Post a Comment