ಪ್ರಾರ್ಥಿಸು..
ಮಂಡಿಯೂರಿ,ಬೊಗಸೆಯೊಡ್ಡಿ
ಮುಗಿಲೆಡೆ ಕಣ್ಣನೆಟ್ಟು ಒಮ್ಮೆ ;
ನಿನಗೆ ಬೇಕಾದುದನ್ನೆಲ್ಲಾ
ದಕ್ಕಿಸಿಕೊಳ್ಳುವುದಕ್ಕಲ್ಲ.!
ನಿನ್ನ ಇಡೀ ಮನಸ್ಸನ್ನು
ತೊಳೆದು ಶುಭ್ರಗೊಳಿಸಿಕೊಳ್ಳುವುದಕ್ಕೆ!
ನಿನ್ನ ಬೇಕುಗಳೆಲ್ಲವನ್ನೂ
ಬೇಡಗಳನ್ನಾಗಿಸಿಕೊಳ್ಳುವುದಕ್ಕೆ!
ಮತ್ತೆ..ಈಗ ಮಂಡಿಯೂರು.
ಮುಗಿಲೆಡೆ,ನಿನ್ನ ಕಣ್ಣು ನೆಡು
ಕಣ್ಣೀರಿಗೆ ಮೇಲಿರುವವನು ತೋಯಬೇಕಿದೆ!
ಎದೆಯ ಬೆಂಕಿಗೆ ಅವನೂ ಸಾಯಬೇಕಿದೆ!
No comments:
Post a Comment